ಜಾಕಿರ್ ಹುಸೇನ್ ರೋಜ್ ಗಾರ್ಡನ್ ಗುಲಾಬಿ ಉದ್ಯಾನವನವು ಚಂಡೀಗಡನಲ್ಲಿರುವ ಒಂದು ಸಸ್ಯವಿಜ್ಞಾನ ಉದ್ಯಾನವನವಾಗಿದ್ದು, ಸುಮಾರು ೩೦ ಎಕರೆಯಷ್ಟು ವಿಸ್ತಾರವಾಗಿದೆ. ಈ ಉದ್ಯಾನವನದಲ್ಲಿ ೧೬೦೦ ವಿಶಿಷ್ಟ ತಳಿಗಳ ಸುಮಾರು ೫೦,೦೦೦ ಗುಲಾಬಿ ಗಿಡಗಳಿವೆ. ಭಾರತದ ಹಿಂದಿನ ರಾಷ್ಟ್ರಪತಿಯಾದ ಜಾಕಿರ್ ಹುಸೇನ್‍ರವರ ನಂತರ ಈ ಉದ್ಯಾನವನ್ನು ಹೆಸರಿಸಲಾಗಿದೆ ಮತ್ತು ೧೯೬೭ರಲ್ಲಿ ಚಂಡಿಗಡದ ಮೊದಲ ಮುಖ್ಯ ಆಯುಕ್ತರು ಇದನ್ನು ಸೃಷ್ಟಿಸಿದರು. ಈ ಉದ್ಯಾನವನವು ಏಷ್ಯಾದಲ್ಲೇ ಅತ್ಯಂತ ದೊಡ್ಡದೆಂಬ ಗಳಿಕೆಯನ್ನು ಹೊಂದಿದೆ. ಗುಲಾಬಿಯೊಂದೆ ಅಲ್ಲದೆ, ಕೆಲ ಔಷಧಿ ಗಿಡಮೂಲಿಕೆಗಳನ್ನು ಸಹ ಇಲ್ಲಿ ಕಾಣಬಹುದು. ಜಾಕಿರ್ ಹುಸೇನ್ ಗುಲಾಬಿ ಉದ್ಯಾನವನದಲ್ಲಿ ಅನೇಕ ಉತ್ಸವ/ಕೂಟಗಳ ಜೊತೆಗೆ ಪ್ರತಿ ವರ್ಷವೂ ವಾರ್ಷಿಕ ಗುಲಾಬಿ ಹಬ್ಬವು ಫೆಬ್ರವರಿ ಅಥವಾ ಮಾರ್ಚಿ ತಿಂಗಳಲ್ಲಿ ನೆಡೆಯುತ್ತದೆ. == ಗ್ಯಾಲರಿ == == == 18/02/2017 . == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಗುಲಾಬಿ ಉದ್ಯಾನವನದ ಬಾಹ್ಯಾಕಾಶ ನೋಟ ಚಂಡೀಗಡದಲ್ಲಿನ ಉದ್ಯಾನವನಗಳು ಗುಲಾಬಿ ಉದ್ಯಾನವನ ಚಂಡೀಗಡದಲ್ಲಿನ ಉದ್ಯಾನವನಗಳು 2017-07-24 ವೇಬ್ಯಾಕ್ ಮೆಷಿನ್ ನಲ್ಲಿ.